ಊಟದ ಪ್ರಭಾವ ಜೀವನದ ಮೇಲೆ


 ಊಟದ ಪ್ರಭಾವ ಜೀವನದ ಮೇಲೆ

ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರ ಮಾತ್ರ ಅಲ್ಲ, ಸಂತಸದಿಂದ ತಯಾರಿಸಿದ,ಮತ್ತು ದೇವರಿಗೆ ಸಮರ್ಪಿಸಿದ ‌ಅನ್ನ.

ನಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ, *BOTH PHYSICAL & MENTAL CHANGES*

ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ ಸಾತ್ವಿಕ ಅಡುಗೆ ಅನ್ನುವುದಿಲ್ಲ. ಆದ್ದರಿಂದ  ಅಡುಗೆ ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವು ದು, ಚೀರಾಡುವುದು ಸರಿಯಲ್ಲ (ಇದಂತೂ ಈಗ ಸರ್ವೇಸಾಮಾನ್ಯ ಆಗಿದೆ)

ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ

*NEGETIVE VIBRATIONS*  ತುಂಬಿಕೊಳ್ಳುತ್ತದೆ ನೆನಪಿಡಿ ನಾವು ಅದನ್ನೇ ಉಣ್ಣುವುದು

ಅದಕ್ಕೆ ನಮ್ಮ ಸಂಪ್ರದಾಯದಲ್ಲಿ, ಆಚರಣೆಗಳಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ, ದೇವರ ನಾಮಸ್ಮರಣೆ ಮಾಡುತ್ತಾ ಅಡುಗೆ ಮಾಡುವ ರೂಢಿ, ಇಂದಿಗೂ ಗುಡಿ , ಮಠದ ದಾಸೋಹಗಳಲ್ಲಿ ಕಾಣುವುದುಂಟು.

ಅಡುಗೆ ಮತ್ತು ಊಟದಲ್ಲಿ ಮೂರು ತರಹ.

*1. ಹೋಟೆಲ್ ಪಾರ್ಟಿಗಳಲ್ಲಿನ ಊಟ*

*2.ಮನೆಯಲ್ಲಿ ತಾಯಿ, ಪತ್ನಿ ಮಾಡುವ ಅಡುಗೆ, ಊಟ.*

*3.ಮಂದಿರ, ಮಠಗಳಲ್ಲಿ ಮಾಡುವ ಅಡುಗೆ, ಊಟ.*

ಈ ಮೇಲಿನ ಮೂರು ಪ್ರಕಾರದ ಊಟದಲ್ಲಿ  ಬೇರೆ ಬೇರೆ ತರಹದ ಸ್ಪಂದನೆಗಳು ಇರುತ್ತವೆ.

*ಹೋಟೆಲ್ ಊಟ*

ಇಲ್ಲಿ ಯಾವುದೇ POSITIVE vibrations ಇರುವುದಿಲ್ಲ.

ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ,ವ್ಯಾಪಾರಕ್ಕಾಗಿಮಾಡಿದ ಅಡುಗೆ ಅದು, ಯಾರು ಅಡುಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹ ಇರುವವೋ ಗೊತ್ತಿಲ್ಲ, ಅಂತಹವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡುಗೆಯಲ್ಲಿ ಇಳಿಯುವವು.

*ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡುಗೆ...*

ಇಲ್ಲಿ ಮಾಡುವ ಅಡುಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಇದೇ *ಪಾಸಿಟಿವ್ ಸ್ಪಂದನೆಗಳು ಇರುವ ಅಡುಗೆ.*

ಆದರೆ ಇತ್ತೀಚಿಗೆ ಮನೆಯಲ್ಲಿ ಅಡುಗೆ ಕೆಲಸದವಳು ಅಡುಗೆ ಮಾಡುವುದು fashion ಆಗಿದೆ. ಮನೆಯಲ್ಲಿ ಒಂದಿಬ್ಬರೇ  ಇದ್ದರೂ ಸಹ ಅಡುಗೆ ಮಾಡುವುದು ಅಡುಗೆ ಕೆಲಸದವಳೇ, 

ಹಾಗಾಗಿ ಅವಳ ಮನಸ್ಸು ಯಾವ ತರಹ ಇರುತ್ತೋ ಗೊತ್ತಿಲ್ಲ. ಅವಳು ಸಿಡುಕುತ್ತಾ,ಒಳಗೊಳಗೇ ಹೇಗೇಗೋ ಕುದಿಯುತ್ತಾ, ಆತುರದಿಂದ, ಆತಂಕದಿಂದ, ಬೇಸರದಿಂದ, ದುಡ್ಡಿಗೆ ಮಾತ್ರ ಅಡುಗೆ ಮಾಡುವಳು. ಹಾಗಾಗಿ ಅಲ್ಲಿಯೂ *ನೆಗೆಟಿವ್ vibration* ಇರುವುದು. ಅಂತಹ ಅಡುಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ.

ಸ್ವಲ್ಪ ವಿಚಾರ ಮಾಡಿ ನೋಡಿ...

ನಮ್ಮ ಮನೆಯ ಅಜ್ಜಿ , ತಾಯಿ,ಹಾಗೂ ಜೀವನ ಸಂಗಾತಿ ಮಾಡಿದ ಅಡುಗೆ ಮತ್ತು ಕೆಲಸದವಳು ಮಾಡುವ ಅಡುಗೆಗೆ ಎಷ್ಟು ‌ವ್ಯತ್ಯಾಸ?

ತಾಯಿ ಅಡುಗೆ ಮಾಡುವಾಗ ಮಗ ಒಂದು ರೊಟ್ಟಿ ಅಥವಾ ಮುದ್ದೆ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಕೆಲಸದವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಮುದ್ದೆ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ, ಏರಿಳಿತ ಉಂಟಾಗುತ್ತದೆ.

*ಮಂದಿರ ಮಠಗಳಲ್ಲಿನ ಅಡುಗೆ....*

ಅದು ದೇವರಿಗೆ ನೈವೇದ್ಯ ಅರ್ಪಿಸಿ, ನಮಗೆ ಬಡಿಸುವ ಅಡುಗೆ, ಅದು ನಾವು ಸೇವಿಸುವುದು ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡುಗೆಯಲ್ಲಿ *ಪಾಸಿಟಿವ್ vibrations* ತುಂಬಿ ತುಳುಕುತ್ತಿರುತ್ತದೆ.

ಆದಕಾರಣ ನಾವು ಮಾಡುವ ಅಡುಗೆ ದೇವರಿಗೆ ಸಮರ್ಪಿಸಿ,  ಅದರ ಸ್ವಲ್ಪ ಭಾಗ ಬಡವರಿಗೆ, ಬಂದವರಿಗೆ,

ಸಮರ್ಪಿಸಿ ನಾವು ಸೇವಿಸುವುದು ಉತ್ತಮ. ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ, ನಮ್ಮ ಅಜ್ಜಿ, ನಮ್ಮ ತಾಯಂದಿರು ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ  ಎಂದು ಕೊಡುವುದನ್ನು ನಾವು ಸಣ್ಣವರಿದ್ದಾಗ ನೋಡಿದ ನೆನಪಿದೆ.

*ಅನ್ನದಲ್ಲಿ ಜಾದು ಇದೆ,.*  ಅಡುಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿರಲಿ. ಮತ್ತು ಅಡುಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ, ಪ್ರಶಾಂತ ಮನಸಿರಲಿ

ಅಡುಗೆ ಆದ ಮೇಲೆ, ಅದನ್ನು ದೇವರಿಗೆ ಸಮರ್ಪಿಸಿ ಊಟ ಮಾಡಿ ನೋಡಿ. 3 ತಿಂಗಳು ಇದನ್ನು ಮಾಡಿ ನೋಡಿ.

*ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.* 

ಶುಭವಾಗಲಿ.

ಲೈಕ್ ಮಾಡಿ, ಶೇರ್ ಮಾಡಿ, ಸದ್ವಿಚಾರವನ್ನು ಹೆಚ್ಚು ಜನರಿಗೆ ತಲುಪಿಸಿ....

Helping our  society to achieve their Health Goals. Like :

1) Weight loss (Healthy & Balanced Weight)

2) Diabetes (Lymphatic Health)

3) Digestive Health (Acidity, Gastric, IBS, etc.,)

4) Joint Health (Arthritis, Knee Pain, etc.,)

5) Heart Health

6) Skin Health (Eczema, Allergy, etc.,)

7) Mental Health

8) Children Nutrition & Health 

9) Emotional Health

10) Thyroid Health

11) Blood Health

12) Liver Health

13) Female Health (PCOD, Cyst, etc.,)

14) Kidney Health

15) Over all Well Being, Medicine free Life. 


*Tell me what's Your priority ? *

"I will be Happy to Help you & your Family".😊😊


#prakrita nature cure 

Padmasri Prashanth 

0091 973 949 8959

0091 636 1018 066

Page link :

https://www.facebook.com/yogachetana?mibextid=ZbWKwL

Blog :

http://yogachetana.blogspot.com/?m=1

Comments